
ಶಿವಮೊಗ್ಗ: ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರವು ಒಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ ಯಾರಾಗ್ತಾರೆ ಬಿಜೆಪಿ ಅಭ್ಯರ್ಥಿ ಎನ್ನುವ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ಈಗಾಗಲೇ ಶಿಕಾರಿಪುರದಿಂದ ಬಿವೈ ವಿಜಯೇಂದ್ರ, ಸಾಗರದಿಂದ ಹರತಾಳ್ ಹಾಲಪ್ಪ, ಸೊರಬದಿಂದ ಕುಮಾರ್ ಬಂಗಾರಪ್ಪ, ತೀರ್ಥಹಳ್ಳಿಯಿಂದ ಆರಗ ಜ್ಞಾನೇಂದ್ರ, ಶಿವಮೊಗ್ಗ ಗ್ರಾಮಾಂತರದಿಂದ ಅಶೋಕ್ ನಾಯ್ಕ್, ಭದ್ರಾವತಿಯಿಂದ ತೀರ್ಥಯ್ಯ, ಹೆಸರು ಬಹುತೇಕ ಖಚಿತವಾಗಿದೆ.
ಶಿವಮೊಗ್ಗದಿಂದ ಯಾರು ಸ್ಪರ್ಧಿಸುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ ಈಗಾಗಲೇ ಬಿಜೆಪಿಯ ರೆಬೆಲ್ ನಾಯಕ ಆಯನೂರು ಮಂಜುನಾಥ್ ಬಿಜೆಪಿ ವಿರುದ್ಧ ಬಂಡಾಯವೆದ್ದು ಹೊರಹೋಗಲು ಸಿದ್ಧತೆ ನಡೆಸಿ ಪ್ರತ್ಯೇಕ ಕಚೇರಿಯನ್ನು ತೆರೆದಿದ್ದಾರೆ. ಕಾಂಗ್ರೆಸ್ ಟಿಕೆಟ್ ನೀಡುವುದು ಖಾತ್ರಿ ಎನ್ನಲಾಗುತ್ತಿದೆ.
ಆದರೆ ಬಿಜೆಪಿಯಿಂದ ಯಾರಿಗೆ ಟಿಕೆಟ್ ನೀಡಲಾಗುತ್ತದೆ ಎನ್ನುವ ಕುತೂಹಲವಿದೆ ಈ ಕುತೂಹಲಕ್ಕೆ ಕಾರಣ ಆಯನೂರು ಮಂಜುನಾಥ್ ಬಿಜೆಪಿಯ ಶಾಸಕ ಕೆ ಎಸ್ ಈಶ್ವರಪ್ಪ ವಿರುದ್ಧ ಸಿಡಿದೆದ್ದಿರುವುದು ಹಾಗೂ ಶಾಸಕ ಈಶ್ವರಪ್ಪನವರಿಗೆ 74 ವರ್ಷ ವಯಸ್ಸಾಗಿದೆ ಎನ್ನುವ ಬಿಜೆಪಿಯ ಅಲಿಖಿತ ನಿಯಮದ ಪ್ರಕಾರ ಈಶ್ವರಪ್ಪ ನವರಿಗೆ ಟಿಕೆಟ್ ನೀಡಲು ಬರುವುದಿಲ್ಲ ಎನ್ನುವುದು.
ಆದರೆ ಬಿಜೆಪಿಯ ಪಕ್ಷ ಕಟ್ಟಿ ಬೆಳೆಸುವಲ್ಲಿ ಈಶ್ವರಪ್ಪನವರ ಪಾತ್ರ ಮಹತ್ವದ್ದಾಗಿದೆ ಯಡಿಯೂರಪ್ಪ ,ಅನಂತ್ ಕುಮಾರ್ ಜೊತೆ ಈಶ್ವರಪ್ಪನವರ ಪಾತ್ರವು ದೊಡ್ಡದಿದೆ ಎನ್ನುವ ಕಾರಣದಿಂದ ಅವರಿಗೆ ಕೊನೆಯ ಚುನಾವಣೆಗೆ ಅವಕಾಶ ನೀಡಬಹುದು.
ಇಲ್ಲವಾದಲ್ಲಿ ಈಶ್ವರಪ್ಪನವರ ಮನವೊಲಿಸಿ ಮುಂದೆ ಪಕ್ಷದಲ್ಲಿ ಉನ್ನತ ಜವಾಬ್ದಾರಿ ನೀಡುವುದಾಗಿ ಹೇಳಿದರೆ ಈಶ್ವರಪ್ಪನವರು ಹೈಕಮಾಂಡ್ ಮಾತಿಗೆ ಬೆಲೆಕೊಟ್ಟು ಚುನಾವಣಾ ನಿವೃತ್ತಿ ಘೋಷಿಸುತ್ತೇನೆ ಆದರೆ ತಮ್ಮ ಮಗ ಕಾಂತೇಶ್ ಗೆ ಟಿಕೆಟ್ ಕೊಟ್ಟರೆ ನಾನು ಚುನಾವಣೆ ನಿವೃತ್ತಿ ಘೋಷಿಸುತ್ತೇನೆ ಎನ್ನಬಹುದು.
ಆದರೆ ಬಿಜೆಪಿ ಹೈಕಮಾಂಡ್ ಇವೆಲ್ಲವನ್ನೂ ಬಿಟ್ಟು ಈಶ್ವರಪ್ಪನವರ ಮನವೊಲಿಸಿ ಆಂತರಿಕ ಸಮೀಕ್ಷೆಯ ಪ್ರಕಾರ ಜಾತಿ ಲೆಕ್ಕಾಚಾರ ಅಥವಾ ಗುಜರಾತ್ ,ಉತ್ತರಪ್ರದೇಶ ಮಾದರಿಯ ಮರೆಹೋದರೇ ಲಿಂಗಾಯತ್ ಸಮುದಾಯಕ್ಕೆ ಸೇರಿದ ಜ್ಯೋತಿಪ್ರಕಾಶ್ ಅವರಿಗೆ ಅಥವಾ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಎಸ್ ದತ್ತಾತ್ರಿ ಅವರಿಗೆ ಈಶ್ವರಪ್ಪನವರ ನಂತರ ಸ್ಥಾನದಲ್ಲಿ ಟಿಕೆಟ್ ನೀಡಬಹುದು.
ಜ್ಯೋತಿ ಪ್ರಕಾಶ್ ಹಾಗೂ ಎಸ್ ದತ್ತಾತ್ರಿ ಇಬ್ಬರೂ ಕೂಡ ಸಂಘಟನೆಯಲ್ಲಿ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಂಡು ಪಕ್ಷ ಕೊಟ್ಟ ಜವಾಬ್ದಾರಿಯನ್ನು ಶಿಸ್ತಿನಿಂದ ನಿರ್ವಹಿಸುತ್ತಾ ಬರುತ್ತಿದ್ದಾರೆ.
ಒಂದು ವೇಳೆ ಬಿಜೆಪಿ ಹೈಕಮಾಂಡ್ ಜಾತಿ ಲೆಕ್ಕಾಚಾರ ನೋಡುವುದಾದರೆ ಪ್ರಬಲ ಲಿಂಗಾಯತ್ ಸಮುದಾಯಕ್ಕೆ ಸೇರಿರುವ ರುದ್ರೇಗೌಡರಿಗೆ ಅಥವಾ ಜ್ಯೋತಿಪ್ರಕಾಶ್ ಅವರಿಗೆ ಮಣೆ ಹಾಕಬಹುದು ಆದರೆ ಶಿಕಾರಿಪುರದಲ್ಲಿ ಈಗಾಗಲೇ ಲಿಂಗಾಯತ್ ಸಮುದಾಯಕ್ಕೆ ಸೇರಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ ವೈ ವಿಜಯೇಂದ್ರ ಗೆ ಸೀಟು ಕೊಟ್ಟರೆ , ಪಕ್ಕದ ತಾಲೂಕು ಭದ್ರಾವತಿಯಲ್ಲಿ ಲಿಂಗಾಯತ್ ಸಮುದಾಯಕ್ಕೆ ಸೇರಿದ ತೀರ್ಥಪ್ಪನವರಿಗೆ ಟಿಕೆಟ್ ಎನ್ನಲಾಗುತ್ತಿದೆ. ಈ ಲೆಕ್ಕಾಚಾರದಲ್ಲಿ ಮತ್ತೆ ಶಿವಮೊಗ್ಗದಲ್ಲೂ ಕೂಡ ಲಿಂಗಾಯತ ಸಮುದಾಯಕ್ಕೆ ಸೀಟು ಕೊಡುವುದು ಕಷ್ಟ.
ಆದರೆ ಮಧ್ಯ ಕರ್ನಾಟಕದಲ್ಲಿ ಅಥವಾ ಚಿಕ್ಕಮಂಗಳೂರು ಶಿವಮೊಗ್ಗ ಭಾಗದಲ್ಲಿ ಇಲ್ಲಿಯವರೆಗೂ ಬ್ರಾಹ್ಮಣ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿಲ್ಲ ಮುಂಚೆಯಿಂದಲೂ ಬ್ರಾಹ್ಮಣ ಸಮುದಾಯ ಪ್ರಬಲವಾಗಿರುವ ಕ್ಷೇತ್ರದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿಲ್ಲ ಎನ್ನುವ ಕೂಗು ಕೇಳಿ ಬರುತ್ತಿದೆ ಆ ದೃಷ್ಟಿಯಿಂದ ಆ ಸಮುದಾಯವಾದ ಅಸಮಾಧಾನವನ್ನು ತಣ್ಣಗಾಗಿಸಲು ಕಳೆದ 35 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಾ ಹಲವು ಜವಾಬ್ದಾರಿಗಳನ್ನು ನಿವಾರಿಸಿಕೊಂಡು ಬಂದು ಬಡ ಕುಟುಂಬದಲ್ಲಿ ಜನಿಸಿ ಚಿಕ್ಕವಯಸ್ಸಿನಲ್ಲಿ ಸಾಂಸಾರಿಕ ಜವಾಬ್ದಾರಿಯನ್ನು ಹೊತ್ತುಕೊಂಡು ಅನೇಕ ಸಾಮಾಜಿಕ ಕಾರ್ಯಗಳನ್ನು ನಿರ್ವಹಿಸಿ ವಿವಿಧ ಸಂಘ-ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಾ ಇಂದಿಗೂ ಸಕ್ರಿಯವಾಗಿ ಬಿಜೆಪಿಯ ಸಂಘಟನೆಯಲ್ಲಿ ತೊಡಗಿರುವ ಎಸ್ ದತ್ತಾತ್ರೇಯವರಿಗೆ ಮಣೆ ಹಾಕಬಹುದಾ ಎನ್ನುವ ಮಾತುಗಳು ಕೇಳಿ ಬರುತ್ತಿವೆ..
ಒಟ್ಟಿನಲ್ಲಿ ಇವೆಲ್ಲ ಗೊಂದಲಗಳಿಗೂ ಇನ್ನೆರಡು ಮೂರು ದಿವಸದಲ್ಲಿ ತೆರೆ ಬೀಳಲಿದೆ…
ರಘುರಾಜ್ ಹೆಚ್.ಕೆ…9449553305…