ಮಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸತತ ಐದನೇ ಬಾರಿಗೆ ವಿಧಾನಸಭೆ ಪ್ರವೇಶಿಸಿರುವ ಯು ಟಿ ಖಾದರ್ ಮೂಲತಃ ಮಂಗಳೂರಿನವರಾಗಿದ್ದು ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ನಂತರ ಕುಮಾರಸ್ವಾಮಿ ಸರ್ಕಾರದಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಈಗ 5ನೇ ಬಾರಿ ಆಯ್ಕೆಯಾಗಿ ಬಂದಿದ್ದರಿಂದ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ 135 ಸ್ಥಾನಗಳೊಂದಿಗೆ ಸರ್ಕಾರ ರಚನೆ ಮಾಡಿರುವುದರಿಂದ ಖಾದರ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯುವ ಎಲ್ಲಾ ಸಾಧ್ಯತೆಗಳು ಇತ್ತು.
ಆದರೆ ಕಾಂಗ್ರೆಸ್ ಪಕ್ಷ ಯು,ಟಿ ಖಾದರ್ ಗೆ ಅಚ್ಚರಿಯ ಬೆಳವಣಿಗೆಯಲ್ಲಿ ಸಂಪುಟದಲ್ಲಿ ಸ್ಥಾನ ನೀಡಲಿಲ್ಲ ಬದಲಾಗಿ ಸ್ಪೀಕರ್ ಸ್ಥಾನಕ್ಕೆ ಸ್ಪರ್ಧಿಸುವಂತೆ ಹೇಳಿ ಅವಿರೋಧವಾಗಿ ಆಯ್ಕೆ ಮಾಡಿದ್ದು ಸದನದಲ್ಲಿ 224 ಸದಸ್ಯರು ಇದನ್ನು ಸರ್ವಾನುಮತದಿಂದ ಒಪ್ಪಿಕೊಂಡರು.
ಖುದ್ದು ಬಿಜೆಪಿ ಪಕ್ಷದ ಹಲವು ಹಿರಿಯ , ಕಿರಿಯ ಶಾಸಕರುಗಳು ಖಾದರ್ ಅವರನ್ನು ಹೊಗಳಿದರು.
ಖಾದರ್ ಒಬ್ಬ ಪಕ್ಷತೀತ ಜಾತ್ಯಾತೀತ ವ್ಯಕ್ತಿತ್ವವನ್ನು ಹೊಂದಿರುವ ವ್ಯಕ್ತಿ ಎಂದು ಎಲ್ಲರೂ ಸದನದಲ್ಲಿ ಒಪ್ಪಿಕೊಂಡರು.
ಒಂದು ಹಂತದಲ್ಲಿ ಅದು ನಿಜ ಕೂಡ ಖಾದರ್ ಬಗ್ಗೆ ಇಲ್ಲಿಯವರೆಗೂ ಯಾರಿಗೂ ಆ ತರಾದ ಭಿನ್ನಾಭಿಪ್ರಾಯಗಳು ಇಲ್ಲ
ಆದರೆ ಈ ಮೇಲಿನ ವೀಡಿಯೋ ಒಂದು ಕಾರ್ಯಕ್ರಮದಲ್ಲಿ ನೂತನ ಸ್ಪೀಕರ್ ಯುಟಿ ಖಾದರ್ ಅವರನ್ನು ಹೊಗಳುವ ಬರದಲ್ಲಿ ಮಾತನಾಡಿರುವ ವಿಡಿಯೋ ಇದಾಗಿದೆ ಈ ವಿಡಿಯೋ ಎಲ್ಲ ಕಡೆ ವೈರಲ್ ಆಗುತ್ತಿದ್ದು ಸಾಕಷ್ಟು ಸುದ್ದಿ ಮಾಡುತ್ತಿದೆ…
ಇದರ ಬಗ್ಗೆ ಸಾಕಷ್ಟು ಪರ ವಿರೋಧಗಳು ವ್ಯಕ್ತವಾಗುತ್ತಿದ್ದಾವೆ…
ರಘುರಾಜ್ ಹೆಚ್.ಕೆ…9449553305…