
ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಇಂದು ಹುಟ್ಟು ಹಬ್ಬದ ಸಂಭ್ರಮ ಅದು ವಿಶ್ವವಿದ್ಯಾಲಯದ ಸಂಭ್ರಮ ಅಲ್ಲ ಮಾನ್ಯ ಕುಲಪತಿಗಳಾದ ವೀರಭದ್ರಪ್ಪನವರ ಮಗಳ ಹುಟ್ಟು ಹಬ್ಬದ ಸಂಭ್ರಮ ಅದಕ್ಕೆ ಅಧ್ಯಾಪಕರಿಗೆ, ಅಧ್ಯಾಪಕೇತರ ನೌಕರರು , ಅತಿಥಿ ಉಪನ್ಯಾಸಕರು, ಏಜೆನ್ಸಿ ನೌಕರರು ಸೇರಿದಂತೆ ಎಲ್ಲರಿಗೂ ಸುತ್ತೋಲೆ ಮೂಲಕ ಆತ್ಮೀಯ ಆಮಂತ್ರಣ ನೀಡಿದ್ದಾರೆ…
ಇದು ಸರಿನಾ..? ತಪ್ಪಾ..? ಅಧಿಕೃತವಾಗಿ ಈತರಾದ ಸುತ್ತೋಲೆ ಹೊರಡಿಸಬಹುದಾ ..? ಎಂದು ಕೇಳೋಣ ಎಂದು ಕರೆ ಮಾಡಿದರೆ ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿಗಳಾದ ವೀರಭದ್ರಪ್ಪನವರು ಮಾಡಬಹುದು ಸರ್ ಏನು ತೊಂದರೆ ಇಲ್ಲ ಅದು ಸುತ್ತೋಲೆ ಅಲ್ಲ ಕರೆಯೋಲೆ, ನೀವು ಬನ್ನಿ ಎಂದು ನಮಗೂ ಆತ್ಮೀಯ ಆಮಂತ್ರಣ ನೀಡಿದರು…
ಇದು ಎಷ್ಟರಮಟ್ಟಿಗೆ ಸರಿ ಅಥವಾ ತಪ್ಪು ಎನ್ನುವ ಚರ್ಚೆ ಎಲ್ಲೆಡೆ ನಡೆಯುತ್ತಿದೆ …
ರಘುರಾಜ್ ಹೆಚ್.ಕೆ..9449553305….