
ಶಿವಮೊಗ್ಗ: ಇತ್ತೀಚಿಗೆ ಎನ್‌ಪಿಎಸ್ ಶಿವಮೊಗ್ಗ ತಾಲ್ಲೂಕು ನೌಕರರ ಸಂಘದ ತಾಲೂಕು ಅಧ್ಯಕ್ಷ ಪ್ರಭಾಕರ್ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ, ಮಾಜಿ ಶಿಕ್ಷಣ ಸಚಿವರಾದ ನಾಗೇಶ್ ಹಾಗೂ ಇನ್ನಿತರ ಹೆಸರು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ತನಗೆ ಹಾಗೂ ತನ್ನ ಕುಟುಂಬಕ್ಕೆ ಸಾಕಷ್ಟು ನೋವು ಉಂಟಾಗಿದೆ ಆದ್ದರಿಂದ ಮನನೊಂದು ನಾನು ನನ್ನ ಬದುಕಿಗೆ ವಿದಾಯ ಹೇಳಲು ಹೊರಟಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು.
ನಂತರ ಅವರ ಪತ್ನಿ ಶ್ರೀಮತಿ ದೀಪಾ ಪೊಲೀಸ್ ಠಾಣೆಗೆ ದೂರನ್ನು ನೀಡಿ ನನ್ನ ಪತಿ ಕಾರ್ ಕೀ ತೆಗೆದುಕೊಂಡು ಎಲ್ಲೋ ಹೋಗಿದ್ದಾರೆ ಅವರನ್ನು ದಯವಿಟ್ಟು ಹುಡುಕಿಕೊಡಿ ಎಂದು ದೂರು ನೀಡಿದ್ದರು.
ಈಗ ಅವರು ತೆಗೆದುಕೊಂಡು ಹೋಗಿರುವ ಕಾರಿನ ಫೋಟೋ ಲಭ್ಯವಾಗಿದ್ದು ಮೇಲ್ಕಂಡ ಈ ಕಾರ್ ಎಲ್ಲಿಯಾದರು ಸುಳಿವು ಸಿಕ್ಕಲ್ಲಿ ತಕ್ಷಣವೇ ಪ್ರಭಾಕರ್ ಅವರ ಅಣ್ಣನಾದ ಯೋಗೇಶ್ ಇವರ ನಂಬರ್ 9535524191 ಗೆ ಮಾಹಿತಿ ನೀಡಬೇಕಾಗಿ ವಿನಂತಿ ಮಾಡಿಕೊಂಡಿದ್ದಾರೆ.
ರಘುರಾಜ್ ಹೆಚ್.ಕೆ..9449553305…